ಜೀವನದಲ್ಲಿ ಗುರುಗಳು ದೊರಕುವುದು ಸುಲಭ ಸಾಧ್ಯವಲ್ಲ. ಗುರುಗಳು ದೊರಕಿದ್ದಾರೆ ಎಂದರೆ ಅದನ್ನು ಬಹುದೊಡ್ಡ ಭಾಗ್ಯವೆಂದೇ ತಿಳಿಯಬೇಕು.
ಯೋಗ್ಯ ಗುರುಗಳು ದೊರಕಿದ ಮೇಲೆ ಅವರ ಸಂದೇಶಗಳನ್ನು ಅರಿತು ಅದರಂತೆ ನಡೆದುಕೊಳ್ಳಬೇಕು. ಗುರುವಿನ ಉಪದೇಶಾಮೃತವನ್ನು ಅರಿಯಲು ಮನಸ್ಸು ಶುದ್ಧವಾಗಿರಬೇಕು, ಪಕ್ಕಗೊಂಡಿರಬೇಕು; ಏಕಾಗ್ರತೆಯಿಂದ ಕೂಡಿರಬೇಕು. ಮನಸ್ಸು ಚಂಚಲವಾದುದು.
ಚಂಚಲಗೊಂಡಿರುವ ಮನಸಿಗೆ ಗುರುವಿನ ಉಪದೇಶ ತಾಕುವುದಿಲ್ಲ. ಆದರೆ ಚಂಚಲಿತವಾಗಿರುವ ಮನಸ್ಸನ್ನು ನಿಗ್ರಹಿಸುವುದು ಸಹ ಸುಲಭ ಸಾಧ್ಯವಲ್ಲ. ಕೆಲವೊಮ್ಮೆ ಅದು ನಾವು ಹೇಳಿದಂತೆ ಕೇಳುವುದಿರಲಿ, ನಮ್ಮನ್ನೇ ತಾನು ಹೇಳುವುದನ್ನು ಕೇಳುವಂತೆ ಒಲಿಸಿಕೊಂಡುಬಿಡುತ್ತದೆ.
ಕೆಲವೊಮ್ಮೆ ಮನುಷ್ಯ ಸಹಜವಾಗಿ ದುರಭ್ಯಾಸಗಳಿಗೆ ಒಳಗಾಗುತ್ತಾನೆ. ಅವುಗಳು ಕೆಟ್ಟದ್ದು ಎಂದು ತಿಳಿದ ಮೇಲೂ ಅವುಗಳಿಂದ ದೂರಾಗಲು ಮನಸ್ಸು ಸಹಕರಿಸುವುದಿಲ್ಲ. ದುರಭ್ಯಾಸದ ಕೆಡಕುಗಳ ನೋವು ನೀಡತೊಡಗಿದ ಮೇಲೆ ಆ ದುರಭ್ಯಾಸವನ್ನು ಬಿಟ್ಟುಬಿಡುವುದಾಗಿ ಆತ ಮನಸ್ಸಿನಲ್ಲಿ ಸಂಕಲ್ಪಿಸಿಕೊಂಡರೂ ಒಂದೇ ದಿನ ಕಳೆಯುವಷ್ಟರಲ್ಲಿ ಮನಸ್ಸು ಮತ್ತೆ ದುರಭ್ಯಾಸದ ಸೆಳೆತಕ್ಕೆ ಒಳಗು ಮಾಡುತ್ತಾನೆ.
ಇದೊಂದು ಸಾರಿ ಹೋಗಲಿ ಎಂದುಕೊಂಡು ಮತ್ತೆ ಅದೇ ಸೆಳೆತಕ್ಕೆ ಒಳಗಾಗುತ್ತಾನೆ. ಹೀಗೆ ಒಂದು ಸಲ, ಮತ್ತೊಂದು ಸಲ ಎಂದು ಆಸೆಯ ಚಿಪಲಕ್ಕೆ ಒಳಗಾಗುತ್ತಲೇ ಹೋಗುತ್ತಾನೆ. ಕೊನೆಗೆ ಮನಸ್ಸನ್ನು ಗಟ್ಟಿಮಾಡಿಕೊಂಡು ತನ್ನ ಆಸೆಗಳ ರೆಂಬೆ ಕೊಂಬೆಗಳನ್ನು ಕಡಿದು ಹಾಕಿಯೇ ಸಂಕಲ್ಪ ಮಾಡುತ್ತಾನೆ. ಆದರೂ ಆಸೆಯ ರೆಂಬೆಕೊಂಬೆಗಳು ಚಿಗುರುತ್ತಲೇ ಹೋಗುತ್ತದೆ. ಅದಕ್ಕೆ ಕಾರಣ, ಅವನ ದುಷ್ಟ ಮನಸ್ಸಿನ ಆಳದವರೆಗೂ ಬೇರು ಬಿಟ್ಟಿರುತ್ತದೆ. ಆದ್ದರಿಂದಲೇ ಆತ ಅದೆಷ್ಟು ಬಾರಿ ತನ್ನ ದುಷ್ಟಗಳ ರೆಂಬೆಗಳನ್ನು
ಕಡಿದು ಹಾಕಿದರೂ ಅದು ಮತ್ತೆ ಮತ್ತೆ ಚಿಗುರುತ್ತಲೇ ಹೋಗುತ್ತದೆ. ಮನುಷ್ಯನ ಚಂಚಲವಾದ ಮನಸ್ಸಿನಲ್ಲಿರುವ ಆಸೆ ಆಕಾಂಕ್ಷೆಗಳು ಅಷ್ಟು ಸುಲಭವಾಗಿ ತಮ್ಮ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿಯೇ ಮನಸ್ಸನ್ನು ನಿಗ್ರಹಿಸುವುದು ಅಷ್ಟು ಸುಲಭವಲ್ಲ. ಸರಿ, ಹಾಗಾದರೆ ಮನಸ್ಸನ್ನು ನಿಗ್ರಹಿಸುವುದಾದರೂ ಹೇಗೆ?
ಮನಸ್ಸನ್ನು ನಿಗ್ರಹಿಸಬಹುದು. ಆದರೆ ಅದು ಒಂದೇ ದಿನಗಳಲ್ಲಿ ಆಗುವ ಕೆಲಸವಲ್ಲ. ಮನಸ್ಸನ್ನು ನಿಗ್ರಹಿಸುವುದಕ್ಕಿಂತ ಮೊದಲು ಅದು ಚಂಚಲಗೊಳ್ಳಲು ಕಾರಣವಾಗಿರುವ ಅಂಶವನ್ನು ಪತ್ತೆ ಮಾಡಬೇಕು. ಮನಸ್ಸು ಚಂಚಲಗೊಳ್ಳಲು ಯಾವುದೋ ಒಂದು ವಿಷಯ ಅಥವಾ ವಸ್ತು ಕಾರಣವಾಗಿರಬಹುದು. ಮೊದಲು ಆ ವಿಷಯ ಅಥವಾ ವಸ್ತುವಿನ ಮೇಲಿರುವ ಇಂದ್ರಿಯಾಸಕ್ತಿಯನ್ನು ಕಡಿಮೆ ಮಾಡಬೇಕು. ವಸ್ತುವಿನ ಮೇಲಿರುವ ಇಂದ್ರಿಯಾಸಕ್ತಿ ಕಡಿಮೆಯಾಗದ ಹೊರತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಇಂದ್ರಿಯಾಸಕ್ತಿಯನ್ನು ಕುಗ್ಗಿಸಿ ಹೃದಯವನ್ನು ಶುದ್ಧ ಮಾಡಿಕೊಳ್ಳಬೇಕು. ದಿನ ದಿನವೂ ಇಂದ್ರಿಯ ಚಾಪಲ್ಯಗಳನ್ನು ಸ್ವಲ್ಪ ಸ್ವಲ್ಪವೇ ದೂರಮಾಡಿ ಮನಸ್ಸಿಗೆ ಸಂಸ್ಕಾರ ನೀಡಬೇಕು. ಹಾಗೆಯೇ ಮನಸ್ಸನ್ನು ಭಗವಂತನೆಡೆಗೆ ತಿರುಗಿಸಬೇಕು. ಮನಸ್ಸಿನ ತುಂಬ ಭಗವಂತನ ವಿಷಯಗಳನ್ನು ತುಂಬಬೇಕು. ಭಗವಂತನ ಧ್ಯಾನದಲ್ಲಿ ತೊಡಗಬೇಕು.
ಮನಸ್ಸಿನ ತುಂಬ ಉತ್ತಮ ವಿಷಯಗಳ ತುಂಬಿಕೊಳ್ಳುತ್ತಿದ್ದಂತೆಯೇ ಅಲ್ಲಿದ್ದ ಕಲ್ಮಷಗಳಿಗೆ ಹೊರ ಹೋಗುತ್ತವೆ. ಇಂದ್ರಿಯ ಚಾಪಲ್ಯಗಳ ಜಾಗ ಖಾಲಿ ಮಾಡುತ್ತಿದ್ದಂತೆಯೇ ಮನಸ್ಸು ನಿಮ್ಮ ಹತೋಟಿಗೆ ಬರತೊಡಗುತ್ತದೆ. ಹೀಗೆ ಸತತ ಪ್ರಯತ್ನದ ಮೂಲಕ ಮನಸ್ಸನ್ನು ನಿಗ್ರಹಿಸಿಕೊಳ್ಳಬೇಕು..
ಮನಸ್ಸನ್ನು ನಿಗ್ರಹಿಸಿದ ಮೇಲಷ್ಟೇ ಸದ್ಗುರುವಿನ ಆಶ್ರಯ ದೊರೆಯಲು ಸಾಧ್ಯ: ಅವರ ಉಪದೇಶಾಮೃತದಿಂದ ಮನಸ್ಸನ್ನು ಶ್ರೀಮಂತಗೊಳಿಸಲು ಸಾಧ್ಯ. ಗುರುಗಳು ರಾಗದ್ವೇಷಾದಿ ಮಾಲಿನ್ಯವನ್ನು ತುಂಬಿಕೊಂಡಿರುವ ಶಿಷ್ಯನ ಮನಸ್ಸನ್ನು ಶುದ್ಧಗೊಳಿಸಿ ಸನ್ಮಾರ್ಗವನ್ನು ತೋರುತ್ತಾರೆ. ಶ್ರೀಗುರುಕೃಪೆ ದೊರಕಿತೆಂದರೆ ಮನಸ್ಸಿನ ಆತಂಕ, ದುಗುಡಗಳೆಲ್ಲ ದೂರಾಗುತ್ತವೆ. ಆ ನಿಟ್ಟಿನಲ್ಲಿ ಮನುಷ್ಯ ಶ್ರೀಗುರು ಕರುಣೆಗೆ ಪಾತ್ರರಾಗಿ ಬದುಕನ್ನು ಆನಂದಮಯಗೊಳಿಸಿಕೊಳ್ಳಬೇಕು.
ವಿಶ್ವಾಸ ಮತ್ತು ಸಂಪ್ರದಾಯದೊಂದಿಗೆ ದೇವಾಂಗ ಸಮುದಾಯದ ಕುಟುಂಬಗಳನ್ನು ಸಂಪರ್ಕಿಸುವುದು.
ಸುರಕ್ಷಿತ ವಿವಾಹ ಅನುಭವಕ್ಕಾಗಿ 100% ಪರಿಶೀಲಿತ ಪ್ರೊಫೈಲ್ಗಳು.
ನಿಮ್ಮ ಜೀವನ ಸಂಗಾತಿಯನ್ನು ಹುಡುಕಲು ಸುಧಾರಿತ ಹೊಂದಾಣಿಕೆ ವ್ಯವಸ್ಥೆ.
ನಿಮ್ಮ ವಿವಾಹ ಪ್ರಯಾಣದ ಪ್ರತಿ ಹಂತದಲ್ಲೂ ನಾವು ಸಹಾಯ ಮಾಡಲು ಇಲ್ಲಿದ್ದೇವೆ.